ಆಫ್ರೆಚ್ ಥಿಯೋಡರ್
	(1821-1907). ಕ್ಯಾಟಲಾಗಸ್ ಕ್ಯಾಟಲೊಗೋರಮ್-ಎನ್ ಆಲ್ಪಬೆಟಿಕಲ್ ರಿಜಿಸ್ಟರ್ ಆಫ್ ಸ್ಯಾಂಸ್ಕ್ರಿಟ್ ವರ್ಕ್ಸ್ ಅಂಡ್ ಆಥರ್ಸ್ ಎಂಬ ಮೂರು ಸಂಪುಟಗಳ ಸೂಚೀ ಗ್ರಂಥವನ್ನು ಸಿದ್ಧಪಡಿಸಿದ ಪ್ರಾಚ್ಯ ಸಾಹಿತ್ಯಪಂಡಿತ, ಭಾಷಾಶಾಸ್ತ್ರನಿಪುಣ. ಎಡಿನ್‍ಬರೋದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿದ್ದ. ಖ್ಯಾತಿವೆತ್ತ ಸಂಸ್ಕೃತ ವಿದ್ವಾಂಸ ಮ್ಯಾಕ್ಸ್‍ಮುಲ್ಲರ್ ಈತನ ಸಹೋದ್ಯೋಗಿ. ಈತನಷ್ಟು ವಿವೇಚನೆಯಿಂದ ಅಷ್ಟೊಂದು ಸಂಸ್ಕøತ ಗ್ರಂಥಗಳನ್ನು ಓದಿದವರು ಮತ್ತೊಬ್ಬರಿಲ್ಲವೆಂದು ಕೀಲ್‍ಹಾರ್ಗ್ ಈ ವಿದ್ವಾಂಸನನ್ನು ಪ್ರಶಂಸೆ ಮಾಡಿದ್ದಾನೆ.											
(ಬಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ